ಪ್ರಜ್ವಲ್ ರೇವಣ್ಣ ವೀಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹಿಂದಿನಿಂದಲೂ ಕೇಳಿಬರುತ್ತಿದೆ.ಜೆಡಿಎಸ್ ನಾಯಕರು ಎಸ್‌ಐಟಿ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು ಚುನಾವಣೆಗೂ, ಪ್ರಜ್ವಲ್ ಪ್ರಕರಣಕ್ಕೂ, ವೈರಲ್ ಆಗಿರುವ ಶಿವಕುಮಾರ್ ಆಡಿಯೋಗೂ ಯಾವ ಸಂಬಂಧವೂ ಇಲ್ಲ ಎಂದು ತಿಳಿಸಿದರು. ಈ ಘಟನೆ ಬಿಜೆಪಿಯ ಫಲಿತಾಂಶವನ್ನು ಬದಲಿಸುವುದಿಲ್ಲ ಎಂದರು.