ಬೆಳಗಾವಿ: ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥರ ವಿರುದ್ಧ ಕಾನೂನುಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಇನ್ನೂ ತಿಳಿಯಬೇಕಿದೆ ಎಂದು ಹೇಳಿದ್ದು, “ಅಶ್ಲೀಲ ವಿಡಿಯೋಗಳು ಐದಾರು ವರ್ಷದ ಹಿಂದಿನವು. ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಮೈತ್ರಿ ಸಮಯದಲ್ಲಿದ್ದಾಗ ಇದೆಲ್ಲವೂ ನಡೆದಿರುವುದು” ಎಂದು ಬಿಜೆಪಿ ಸಿ.ಟಿ. ರವಿ ಅವರು ಹೇಳಿದ್ದು, ಆ ಬಗ್ಗೆ ಪ್ರತಿಕ್ರಿಯಿಸಿ “ಬಿಜೆಪಿಗರು ಬರೀ ಸುಳ್ಳು ಹೇಳುತ್ತಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಪುಕ್ಕಲು ಸಂಸದರು
ರಾಜ್ಯದಲ್ಲಿ 2019ರಲ್ಲಿ 25 ಸಂಸದರು ಗೆದ್ದರೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ. ಬಿಜೆಪಿ ಸಂಸದರಲ್ಲಿ ಪುಕ್ಕಲುತನ ಹೆಚ್ಚಿದೆ. ಕರ್ನಾಟಕದ ಅಭಿವೃದ್ದಿಗೆ ಕೇಂದ್ರದ ಕೊಡುಗೆ ಶೂನ್ಯವಿದೆ. ನಿಂತು, ಕೋವಿಡ್, ಬರಗಾಲಗಳ ಕಾಲದಲ್ಲಿ ರಾಜ್ಯದ ಜನರ ಸಂಕಷ್ಟಕ್ಕೆ ಕೇಂದ್ರ ಬಿಜೆಪಿ ಸರಕಾರ ಗಮನ ಹರಿಸಲಿಲ್ಲ. ಆದರೆ, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರ ಹೊಂದಿದ ನಂತರ ಎಲ್ಲ ೫ ಗ್ಯಾರಂಟಿಗಳನ್ನು ಪೂರ್ಣವಾಗಿ ಜಾರಿಗೆ ತಂದಿತು. ಜನ ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸ ಹೊಂದಿದ್ದಾರೆ. ಹೀಗಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಬಿಜೆಪಿ ಸಂಸದರು ಗೆಲ್ಲುತ್ತಾರೆ ಎಂದು ನಂಬಿಕೆ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಸ್ತುವಾರಿ ರಣದೀಪ ಸುರ್ಜೇವಾಲ ಅವರು ಪ್ರತಿಕ್ರಿಯಿಸಿ, ಸ್ಥಳೀಯ ನಾಯಕರು ಮಾಹಿತಿ ನೀಡಿದರೂ ಮೋದಿ ಮತ್ತು ಅಮಿತ್ ಶಾ ಇದನ್ನು ನಿರ್ಲಕ್ಷಿಸಿದ್ದು ಏಕೆ? ಅವರ ಪರ ಪ್ರಚಾರ ಮಾಡಿದ್ದಲ್ಲದೇ ಪ್ರಜ್ವಲ್ ಗೆದ್ದರೆ ತಮಗೆ ಶಕ್ತಿ ಬರುತ್ತದೆ ಎಂದು ಸ್ವತಃ ಮೋದಿ ಅವರು ಹೇಳಿದ್ದು ಏಕೆ? ವಿದೇಶಕ್ಕೆ ಪರಾರಿಯಾಗುವಂತೆ ಅವಕಾಶ ನೀಡಿದ್ದು ಏಕೆ? ಪಾಸಪೋರ್ಟ್ ನಿಷೇಧಿಸಿ ಕಾನೂನು ಕ್ರಮ ಜರುಗಿಸಲು ಹಿಂದೆಟ್ಟು ಹಾಕುತ್ತಿರುವುದು ಏಕೆ? ಈ ಪ್ರಶ್ನೆಗಳನ್ನು ಬಿಜೆಪಿಗಳಿಗೆ ಹಿಂದಿನಂತೆ ಎದುರಿಸಿದರು.