Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ಇಂಡಿಯಾ ಒಕ್ಕೂಟದ ನಾಯಕರನ್ನು ರಾವಣ ಮತ್ತು ಕಂಸನ ಅನುಯಾಯಿಗಳೆಂದು ವಾಗ್ದಾಳಿ ಮಾಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್


ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಇಂಡಿಯಾ ಒಕ್ಕೂಟದ ನಾಯಕರನ್ನು ರಾವಣ ಹಾಗೂ ಕಂಸನ ಅನುಯಾಯಿಗಳೆಂದು ವಾಗ್ದಾಳಿ ನಡೆಸಿದ್ದಾರೆ. “ಶ್ರೀರಾಮನನ್ನು ನಂಬಬೇಡಿ, ಕೃಷ್ಣನನ್ನು ನಂಬಬೇಡಿ ಎಂದು ಹೇಳುವವರು, ಭಗವದ್ಗೀತೆ ಮತ್ತು ಗೋವಿನ ಬಗ್ಗೆ ನಂಬಿಕೆ ಇಲ್ಲದವರು, ರಾವಣನಂತೆ ಮಾರುವೇಷ ತೊಟ್ಟು ಸೀತೆಯನ್ನು ಅಪಹರಿಸಿದಂತೆ ಮತವನ್ನು ಅಪಹರಿಸಲು ಬಂದಿದ್ದಾರೆ” ಎಂದು ಅವರು ಉಧ್ಘರಿಸಿದ್ದಾರೆ.

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯಾದವ್, ಬಲ್ಲಿಯಾ ಜಿಲ್ಲೆಯ ಶೇಖ್‌ಪುರ ಮತ್ತು ಬೈರಿಯಾದಲ್ಲಿ ನಡೆದ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

“ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆ ಮತ್ತು ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ” ಎಂದು ಯಾದವ್, ಇಂಡಿಯಾ ಒಕ್ಕೂಟದ ವಿರುದ್ಧ ಟೀಕಿಸಿದರು. ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಸೋಲಿಸಲು ಜನರಿಗೆ ಮನವಿ ಮಾಡಿದರು.

“ರಾವಣ ನಕಲಿ ಸಾಧುವಿನ ವೇಷ ಧರಿಸಿ ಸೀತೆಯನ್ನು ಅಪಹರಿಸಿದಂತೆಯೇ, ಕಾಂಗ್ರೆಸ್ ಮತ್ತು ಸಮಾಜವಾದಿ ಸಿದ್ಧಾಂತದವರು ನಕಲಿ ವೇಷ ಧರಿಸಿ ಮತ ಕೇಳಲು ಬರುತ್ತಿದ್ದಾರೆ” ಎಂದು ಅವರು ಹೇಳಿದರು.

“ಗಾಜಿಪುರದಲ್ಲಿ ಯಾವುದೇ ಕೈಗಾರಿಕೆ ಇಲ್ಲ. ಇಲ್ಲಿ ಕೇವಲ ಒಂದು ಕುಟುಂಬದ ಲೂಟಿ ಉದ್ಯಮ ನಡೆಯುತ್ತಿದ್ದು, ಭಯೋತ್ಪಾದನೆಯ ಅಬ್ಬರ ಹೆಚ್ಚಾಗಿದೆ. ಆದರೆ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಎಲ್ಲದಕ್ಕೂ ಲೆಕ್ಕ ಸಿಗುತ್ತದೆ” ಎಂದು ಯಾದವ್ ಹೇಳಿದರು.

“ದೆಶವನ್ನು ತಿಂದು ಪಾಕಿಸ್ತಾನವನ್ನು ಹಾಡಿ ಹೊಗಳುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ಬಿಜೆಪಿ ಸರ್ಕಾರ ಪಾಕಿಸ್ತಾನಿಯ ಮನೆಗೆ ನುಗ್ಗಿ ಕೊಲ್ಲುವ ಸಾಹಸ ಮಾಡಿದೆ. ಪ್ರಧಾನಿ ಮೋದಿಯವರನ್ನು ನಿಂದಿಸುವವರಿಗೆ ಈ ಬಾರಿ ಸಾರ್ವಜನಿಕರೇ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಯಾದವ್ ತಮ್ಮ ಭಾಷಣದಲ್ಲಿ ತಿಳಿಸಿದರು.

Leave a Comment

Your email address will not be published. Required fields are marked *

Scroll to Top