Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ಜಾರ್ಖಂಡದಲ್ಲಿ ED ದಾಳಿ: ಸಚಿವರ ಕಾರ್ಯದರ್ಶಿ ಬಳಿ ಕಂತೆ ಕಂತೆ ನಗದು ವಶ

ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ರಾಂಚಿಯ ಹಲವು ಸ್ಥಳಗಳಲ್ಲಿ ಇಂದು (ಸೋಮವಾರ) ದಾಳಿ ನಡೆಸಿದ್ದು, ಜಾರ್ಖಂಡ್ ಸಚಿವ ಅಲಂಗೀರ್‌ ಆಲಂ ಅವರ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಯಲ್ಲಿ ₹20 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ.

 

ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದ ವೀರೇಂದ್ರ ರಾಮ್ ಅವರನ್ನು ₹100 ಕೋಟಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದ ಆರೋಪದ ಮೇಲೆ ಕಳೆದ ವರ್ಷ ಬಂಧಿಸಲಾಗಿತ್ತು. ವೀರೇಂದ್ರ ಅವರ ಬಳಿ ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿರುವ ಪೆನ್‌ಡ್ರೈವ್‌ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಇದೇ ಪ್ರಕರಣದಲ್ಲಿ ಸಂಜೀವ್ ಲಾಲ್ ಅವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.++++++

Leave a Comment

Your email address will not be published. Required fields are marked *

Scroll to Top
“ಅರವಿಂದ್ ಕೇಜ್ರಿವಾಲ್ರನ್ನು ಸಿಎಂ ಹುದ್ದೆಯಿಂದ ವಜಾಗೊಳಿಸುವ ಅರ್ಜಿ ತಿರಸ್ಕೃತ”
“ಅರವಿಂದ್ ಕೇಜ್ರಿವಾಲ್ರನ್ನು ಸಿಎಂ ಹುದ್ದೆಯಿಂದ ವಜಾಗೊಳಿಸುವ ಅರ್ಜಿ ತಿರಸ್ಕೃತ”