Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ನಾನು ಹಿಂದು ಅಥವಾ ಮುಸ್ಲಿಂ  ಬಗ್ಗೆ ಮಾತನಾಡಿಲ್ಲ : ಪ್ರಧಾನಿ ಮೋದಿ

ನಾನು ಹಿಂದೂ ಅಥವಾ ಮುಸ್ಲಿಂ ಕುರಿತು ಮಾತನಾಡಿಲ್ಲ. ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದ ಮಾತ್ರಕ್ಕೆ ಅದು ಮುಸ್ಲಿಮರೇ ಎಂದು ನೀವು ಅರ್ಥೈಸಿಕೊಳ್ಳುವುದೇಕೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. ನಾನು ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಇಲ್ಲ ಬಂದಿಲ್ಲ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬುದು ನನ್ನ ಗುರಿ, ಎಲ್ಲಾ ಧರ್ಮದವರನ್ನು ಒಟ್ಟಿಗೆ ಕೊಂಡೊಯ್ಯುವುದೇ ನನ್ನ ಉದ್ದೇಶ ಎಂದರು.

“ಈದ್ ದಿನಗಳಲ್ಲಿ ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಮುಸ್ಲಿಂ ಕುಟುಂಬದಲ್ಲಿ ಮಾಡಿದ್ದ ಅಡುಗೆಯನ್ನೇ ಊಟ ಮಾಡುತ್ತಿದ್ದೆವು. ಇಂದಿಗೂ ಅನೇಕ ಮುಸ್ಲಿಂ ಸ್ನೇಹಿತರಿದ್ದಾರೆ,” ಎಂದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮಗೆ ಮತ ಹಾಕುತ್ತಾರೆಯೇ ಎಂಬ ಪ್ರಶ್ನೆಗೆ, “ದೇಶದ ಜನತೆ ಮತ ಹಾಕುತ್ತಾರೆ,” ಎಂದು ಮೋದಿ ಉತ್ತರಿಸಿದರು.

“ಹೆಚ್ಚು ಮಕ್ಕಳಿರುವಲ್ಲಿ ಬಡತನವಿದೆ. ನಿಮ್ಮ ಮಕ್ಕಳನ್ನು ಬೇರೆಯವರು ನೋಡಿಕೊಳ್ಳುವ ಪರಿಸ್ಥಿತಿ ಬರಬಾರದು,” ಎಂದರು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ಗಲಭೆಯ ನಂತರ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, “ನನ್ನ ವಿರೋಧಿಗಳು ಮುಸ್ಲಿಮರಿಗೆ ನನ್ನ ಮೇಲಿದ್ದ ಗೌರವವನ್ನು ಹಾಳು ಮಾಡಲು ಪ್ರಯತ್ನಿಸಿದರು,” ಎಂದರು.

“ನಾನು ಹಿಂದೂ-ಮುಸ್ಲಿಂ ಎಂದು ಭೇದಭಾವ ಮಾಡಿದರೆ, ಅಂದಿನಿಂದ ನನಗೆ ಸಾರ್ವಜನಿಕ ಕ್ಷೇತ್ರದಲ್ಲಿ ನಿಲ್ಲಲು ಅವಕಾಶವಿರುವುದಿಲ್ಲ,” ಎಂದು ಹೇಳಿದರು.

ಮೊದಲು ಹೆಳಿದ್ದೆನ್ನು : “ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಆಸ್ತಿಯಲ್ಲಿ ಹೆಚ್ಚಿನ ಹಕ್ಕುಗಳನ್ನು ಪಡೆಯಬೇಕೆಂದು ಕಾಂಗ್ರೆಸ್ ಬಯಸುತ್ತದೆ,” ಎಂದು ಮೋದಿ ಹೇಳಿದರು. “ದೇಶದ ಸಂಪತ್ತನ್ನು ನುಸುಳುಕೋರರಿಗೆ ಹಂಚಲು ಕಾಂಗ್ರೆಸ್ ಬಯಸುತ್ತಿದೆ,” ಎಂದರು. ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಮರುಹಂಚಿಕೆ ಮಾಡುವ ಉದ್ದೇಶದ ಬಗ್ಗೆ ವರದಿಗಳನ್ನು ಉಲ್ಲೇಖಿಸಿ, “ಕಾಂಗ್ರೆಸ್ ಸಮೀಕ್ಷೆ ನಡೆಸಿದೆ , ಮಹಿಳೆಯರ ಬಳಿ ಇರುವ ಮಂಗಳಸೂತ್ರವನ್ನು ಸಹ ಬಿಡುವುದಿಲ್ಲ, ಮತ್ತು ಈ ಮಟ್ಟಕ್ಕೆ ಹೋಗುತ್ತಾರೆ,” ಎಂದು ಹೇಳಿದರು.

Leave a Comment

Your email address will not be published. Required fields are marked *

Scroll to Top