ಹೊಸದಿಲ್ಲಿ(Modi 3.O): ಬಿಜೆಪಿ ಅಗ್ರಗಣ್ಯ ನಾಯಕ ನರೇಂದ್ರ ಮೋದಿ ಅವರು ಇಂದು ಸಾಯಂಕಾಲ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮವು ಸಾಯಂಕಾಲ 7:15ಕ್ಕೆ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.ಮೋದಿಯೊಂದಿಗೆ ಸುಮಾರು 30 ಮಂದಿ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 81 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸತತ ಮೂರನೇ ಅವಧಿಗೆ ಸಜ್ಜಾಗುತ್ತಿರುವಂತೆಯೇ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಹಲವು ಪ್ರಮುಖ ಮಿತ್ರಪಕ್ಷಗಳ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿದೆ ಕೆಲ ಸಂಭವನೀಯ ಮಂತ್ರಿಗಳ ಸಂಕ್ಷಿಪ್ತ ನೋಟ:ತೆಲುಗು ದೇಶಂ ಪಕ್ಷ (ಟಿಡಿಪಿ):
- ರಾಮ್ ಮೋಹನ್ ನಾಯ್ಡು: 36 ವರ್ಷದ ರಾಮ್ ಮೋಹನ್ ನಾಯ್ಡು ಮೂರು ಬಾರಿಯ ಸಂಸದ. ಎಂಬಿಎ ಪದವೀಧರರು ಮತ್ತು ಕ್ಯಾಬಿನೆಟ್ ದರ್ಜೆ ಸಿಗುವವರು.
- ಚಂದ್ರಶೇಖರ್ ಪೆಮ್ಮಸಾನಿ: ಗುಂಟೂರು ಸಂಸದ, 48 ವರ್ಷದ ವೈದ್ಯ.
- ಲಲನ್ ಸಿಂಗ್: 69 ವರ್ಷದ ರಾಜೀವ್ ರಂಜನ್ ಸಿಂಗ್, ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆಪ್ತ.
- ರಾಮನಾಥ್ ಠಾಕೂರ್: ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರ ಪುತ್ರ ಮತ್ತು ರಾಜ್ಯಸಭಾ ಸಂಸದ.
- ಎಚ್ ಡಿ ಕುಮಾರಸ್ವಾಮಿ: ಕರ್ನಾಟಕದ ಮಾಜಿ ಸಿಎಂ, ಈ ಬಾರಿ ಮಂಡ್ಯದಿಂದ ಗೆದ್ದು ಬಂದ ಸಂಸದ.
- ಚಿರಾಗ್ ಪಾಸ್ವಾನ್: ಬಿಹಾರದ ಹಾಜಿಪುರ ಸಂಸದ, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ.
- ಅನುಪ್ರಿಯಾ ಪಟೇಲ್: ಅಪ್ನಾ ದಳ (ಸೋನೆಲಾಲ್) ಪಕ್ಷದ ಮುಖ್ಯಸ್ಥೆ, 2021ರವರೆಗೆ ಕೇಂದ್ರ ಸಚಿವೆಯಾಗಿದ್ದರು.
- ಜಯಂತ್ ಚೌಧರಿ: ರಾಜ್ಯಸಭಾ ಸಂಸದ, ಆರ್‌ಎಲ್‌ಡಿ ನಾಯಕ.