ಹೈದರಾಬಾದ್, ಮೇ 8: ಐದು ವರ್ಷದಿಂದ ಅಂಬಾನಿ ಮತ್ತು ಅಡಾನಿಯನ್ನು ಬಯ್ಯುತ್ತಲೇ ಬಂದಿದ್ದ ಕಾಂಗ್ರೆಸ್ ಶಹಜಾದೆ (ರಾಹುಲ್ ಗಾಂಧಿ) ರಾತ್ರೋರಾತ್ರಿ ಬಯ್ಯೋದನ್ನೇ ನಿಲ್ಲಿಸಿದ್ದಾರೆ. ಅವರಿಂದ ಎಷ್ಟು ಕಪ್ಪು ಹಣ ಇವರಿಗೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಶ್ನೆ ಮಾಡಿದ್ದಾರೆ. ತೆಲಂಗಾಣದ ರಾಜನ್ನ ಸಿರಿಸಿಲ್ಲ (Rajanna Circilla) ಜಿಲ್ಲೆಯ ವೇಮುಲವಾಡ ಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತನಾಗಿರುವ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಚುನಾವಣೆ ಘೋಷಣೆಯ ಸಮಯದಲ್ಲಿಯೇ ಅಂಬಾನಿ ಮತ್ತು ಅಡಾನಿಯ ಜಪ ಮಾಡುವುದನ್ನು ರಾಹುಲ್ ಗಾಂಧಿ ನಿಲ್ಲಿಸಿದ್ದು ಯಾಕೆ ಎಂದು ಕೇಳಿದ್ದಾರೆ.