Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ಲೋಕಸಭೆ ಚುನಾವಣೆ: 18 ವಿದೇಶಿ ರಾಜಕೀಯ ಪಕ್ಷಗಳಿಗೆ BJPಆಹ್ವಾನ

BJP

 

ಲೋಕಸಭಾ ಚುನಾವಣೆಯ ಅನುಭವವನ್ನು ಪಡೆದುಕೊಳ್ಳಲು, 10 ದೇಶಗಳ 18 ರಾಜಕೀಯ ಪಕ್ಷಗಳಿಗೆ ಬಿಜೆಪಿ(BJP) ಆಹ್ವಾನವನ್ನು ನೀಡಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ವಿದೇಶಾಂಗ ಸಚಿವ ಜೈಶಂಕರ್‌ ಅವರೊಂದಿಗೆ ಈ ಪಕ್ಷಗಳ ಪ್ರತಿನಿಧಿಗಳು ಚರ್ಚೆಯನ್ನು ನಡೆಸಲಿದ್ದಾರೆ.

ಬಿಜೆಪಿ ತಿಳಿಸಿದೆ: ಪಕ್ಷದ ಚುನಾವಣಾ ಪ್ರಚಾರದ ಒಳನೋಟಗಳ ಬಗ್ಗೆ ಮಾಹಿತಿ ನೀಡಲಾಗುವುದಲ್ಲದೆ, ಒಟ್ಟಾರೆ ಚುನಾವಣೆಯ ರಣತಂತ್ರಗಳ ಬಗ್ಗೆ ಮಾಹಿತಿಯನ್ನೂ ನೀಡಲಾಗುವುದು.

ಇಂದು ಜೆ.ಪಿ ನಡ್ಡಾ ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರ ಜೊತೆ ವಿದೇಶಿ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ.

ಇವುಗಳಲ್ಲಿ ಅಸ್ಟ್ರೇಲಿಯಾದ ಲಿಬರಲ್ ಪಾರ್ಟಿ, ವಿಯೆಟ್ನಾಂನ ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂ, ಬಾಂಗ್ಲಾದೇಶದ ಅವಾಮಿ ಲೀಗ್, ಇಸ್ರೇಲ್‌ನ ಲಿಕುಡ್ ಪಕ್ಷ, ಉಗಾಂಡಾದ ರಾಷ್ಟ್ರೀಯ ಪ್ರತಿರೋಧ ಚಳವಳಿ, ತಾಂಜಾನಿಯಾದ ಚಮಾ ಚಾ ಮಪಿಂಡುಜಿ ಮತ್ತು ರಷ್ಯಾದ ಯುನೈಟೆಡ್ ರಷ್ಯಾ ಪಾರ್ಟಿಯ ಪ್ರತಿನಿಧಿಗಳು ಸೇರಿದ್ದಾರೆ.

ಶ್ರೀಲಂಕಾದಿಂದ ಶ್ರೀಲಂಕಾ ಪೊದುಜನ ಪೆರಮುನಾ, ಯುನೈಟೆಡ್ ನ್ಯಾಶನಲ್ ಪಾರ್ಟಿ, ಮಿಲಿಟೆಂಟ್ ಸೋಷಿಯಲಿಸ್ಟ್ ಮೂವ್‌ಮೆಂಟ್‌, ಮಾರಿಷಸ್ ಲೇಬರ್ ಪಾರ್ಟಿ, ಮಾರಿಷಸ್ ಮಿಲಿಟೆಂಟ್ ಮವ್‌ಮೆಂಟ್‌ ಮತ್ತು ಪಾರ್ಟಿ ಮಾರಿಷಿಯನ್ ಸೋಶಿಯಲ್ ಡೆಮಾಕ್ರಟ್ ಮಾರಿಷಸ್, ನೇಪಾಳಿ ಕಾಂಗ್ರೆಸ್, ಜನಮತ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್), ಕಮ್ಯುನಿಸ್ಟ್ ನೇಪಾಳದ ಪಕ್ಷ (ಮಾವೋವಾದಿ) ಮತ್ತು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷಗಳಿಗೆ ಬಿಜೆಪಿ ಅಹ್ವಾನ ನೀಡಿದೆ.

Leave a Comment

Your email address will not be published. Required fields are marked *

Scroll to Top