Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

PSI Exam, ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕಗಳು ಪ್ರಕಟ – PSI ಪರೀಕ್ಷೆ 402 ಹುದ್ದೆಗಳು

ರಾಜ್ಯ ಪೊಲೀಸ್‌ ಇಲಾಖೆಯ ಸಬ್‌ ಇನ್‌ಸ್ಪೆಕ್ಟರ್‌ (PSI) ಹುದ್ದೆ ಸಹಿತ ವಿವಿಧ ಇಲಾಖೆ/ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳ ಸಂಭಾವ್ಯ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಪ್ರಕಟಿಸಿದೆ.

ಪೊಲೀಸ್‌ ಇಲಾಖೆಯ 402 ಪಿಎಸ್‌ಐ ಹುದ್ದೆಗಳಿಗೆ ಸೆಪ್ಟೆಂಬರ್ 22ರಂದು ಪರೀಕ್ಷೆ ನಡೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಳಿದಂತೆ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ: ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ.ಪೇದೆ, ಕುಶಲಕರ್ಮಿ, ತಾಂತ್ರಿಕ ಸಹಾಯಕ ಹುದ್ದೆಗಳಿಗೆ (ಒಟ್ಟು 36) ಜುಲೈ 12ರಿಂದ 14ರ ವರೆಗೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ: ಸಹಾಯಕ ಎಂಜಿನಿಯರ್‌ (ಸಿವಿಲ್) ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್‌ ಸಿ) ಹುದ್ದೆಗಳಿಗೆ (ಒಟ್ಟು 64) ಆಗಸ್ಟ್‌ 11ರಂದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ನಿರ್ವಾಹಕ (ದರ್ಜೆ-3 ಮೇಲ್ವಿಚಾರಕೇತರ) ಹುದ್ದೆಗಳಿಗೆ (ಒಟ್ಟು 2,500) ಸೆಪ್ಟೆಂಬರ್ 1ರಂದು.

ಕಂದಾಯ ಇಲಾಖೆ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ (ಒಟ್ಟು 1,000) ಅಕ್ಟೋಬರ್ 27ರಂದು.

ಪರೀಕ್ಷಾ ದಿನಾಂಕಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ.

Leave a Comment

Your email address will not be published. Required fields are marked *

Scroll to Top