Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

ಗೋಕಾಕ್‌ (ಬೆಳಗಾವಿ) : ಮೊದಲಿನಿಂದ ಸಿಡಿ ವಿಚಾರದ ಕುರಿತು ಪದೇ ಪದೇ ಹೇಳಿಕೊಂಡು ಬಂದಿದ್ದೆ. ಆಗ ಎಲ್ಲರೂ ನನ್ನ ನೆಗ್ಲೆಟ್‌ ಮಾಡಿದ್ರೂ, ನಗ್ತಾ ಕೂತಿದ್ರೂ, ಇವತ್ತು ಒಬ್ಬರಿಗೆ ಆಗಿದೆ, ಮುಂದೆ ಸಿದ್ದರಾಮಯ್ಯಗೂ ಬರಬಹುದು, ಪರಮೇಶ್ವರ ಅವರಿಗೂ ಬರಬಹುದು ಎಂದು ಮಾಜಿ ಸಚಿವ, ಗೋಕಾಕ್‌ನ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮತದಾನ  ಬಳಿಕ ಮಾತನಾಡಿದ ಅವರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರದ್ದು ಸಿಡಿ ಮುಂದೆ ಬರಬಹುದು. ಮೊದಲಿನಿಂದ ಸಿಡಿ ವಿಚಾರದ ಕುರಿತು ಪದೇ ಪದೇ ಹೇಳಿಕೊಂಡು ಬಂದಿದ್ದೆ. ಆಗ ಎಲ್ಲರೂ ನನ್ನಾ ನೆಗ್ಲೆಟ್ ಮಾಡಿ ನಗುತ್ತಾ ಕೂತಿದ್ರು. ಇವತ್ತು ಒಬ್ಬರಿಗೆ ಆಗಿದೆ ಮುಂದೆ ಸಿದ್ದರಾಮಯ್ಯಗೂ ಬರಬಹುದು, ಪರಮೇಶ್ವರ ಅವರಿಗೂ ಬರಬಹುದು. ದಯವಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇತಿಶ್ರೀ ಹಾಡಬೇಕು. ಸಿಎಂ ಅವರ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ ಕೇಸ್:ಪ್ರಜ್ವಲ್ ರೇವಣ್ ಕೇಸ್ ಸಂಬಂಧಿತ ಆಡಿಯೋ ಸಾಕ್ಷಿಗಳು ಡಿಕೆಶಿ ನೇರವಾಗಿ ಭಾಗಿಯಾಗಿದ್ದು,ನನ್ನ ಬಳಿ ಸಾಕ್ಷಿ ಇವೆ. ಈ ಕೇಸ್ ನಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿರುವ ಬಗ್ಗೆ ನೇರವಾಗಿ ಸಾಕ್ಷಿಯಿದೆ. ಅವರ ಬಳಿ ಅಲ್ಲಿ ಇಲ್ಲಿ ಅಂತಾ ಸುತ್ತು ಹಾಕಿರುವುದು ಇದೆ. ನನ್ನ ಕೇಸ್ ನಲ್ಲಿ ಡಿಕೆ ಶಿವಕುಮಾರ್ ಮಾತಾಡಿದ್ದು ಇದೆ ಅದನ್ನು ಕೊಡ್ತೇನಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

ಸಿಬಿಐಗೆ ಕೇಸ್ ಕೊಟ್ಟರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೇಲುಸ್ತುವಾರಿ ಮಾಡಬೇಕು. ಮಹಾನ್ ನಾಯಕ ಹಣದಲ್ಲಿ ಬಹಳಷ್ಟು ಪ್ರಭಾವಿ ಇದ್ದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಎನ್ನುವ ಸೊಕ್ಕು ಇದೆ. ದೇಶದಲ್ಲಿ ಕಾನೂನು ಉಳಿಯಬೇಕು ಅಂದ್ರೆ ಈ ಕೇಸ್ ನಲ್ಲಿ ಫಿಕ್ಸ್ ಆಗಬೇಕು. ನನ್ನ ಕೇಸ್ ನಲ್ಲಿ ಕೇವಲ ಡಿಕೆ ಶಿವಕುಮಾರ್ ಭಾಗಿಯಾಗಿಲ್ಲ. ನಮ್ಮವರೂ ಕೇಸ್ ನಲ್ಲಿ ಇದ್ದಾರೆ ಜೂನ್ 4ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದರು.ಸತತ ನಾಲ್ಕು ವರ್ಷದಿಂದ ಕೊಷನ್ ಮಾರ್ಕ್ ಇದೆ. ಇದೆಲ್ಲದಕ್ಕೂ ಜೂನ್ 4ರ ನಂತರ ಇತಿಶ್ರೀ ಹಾಡೋಣ ಎಂದರು.

Leave a Comment

Your email address will not be published. Required fields are marked *

Scroll to Top