Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

SSLC ಹುಡುಗಿ ಕತ್ತು ಕತ್ತರಿಸಿ ಕೊಲೆ..!

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ (SSLC Student Murder) ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ಸಿ ಫಲಿತಾಂಶ ಹೊರ ಬಿದ್ದ ಮೇ 09ರಂದು ಆರೋಪಿ ಬಾಲಕಿಯ ರುಂಡ ಕತ್ತರಿಸಿ ಎಸ್ಕೇಪ್ ಆಗಿದ್ದ. 

ಸದ್ಯ ಸೋಮವಾರಪೇಟೆ ತಾಲೂಕಿನ ಒಂದು ಗ್ರಾಮದಲ್ಲಿ ಅಡಗಿದ್ದ ಆರೋಪಿ ಪ್ರಕಾಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಿನದ ಬೆಳಿಗ್ಗೆ, ಹಲವು ತಂಡಗಳ ಸಹಾಯದಿಂದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು.

ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಡಿಕೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.ಎ

ಏನಿದು ಘಟನೆ

ಸೂರ್ಲಬ್ಬಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಮೀನಾ, ಈ ಕುಗ್ರಾಮದಲ್ಲಿ ಈ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಏಕೈಕ ವಿದ್ಯಾರ್ಥಿನಿ. ಆದರೆ ಆಕೆಯ ದುರಂತ ನೋಡಿ. ಒಂದು ಕಡೆ ಮೀನಾ ಎಸ್ಎಸ್ಎಲ್ಸಿ ಪಾಸ್ ಆದ ಖುಷಿಯಲ್ಲಿದ್ದಳು. ಮತ್ತೊಂದು ಕಡೆ ಅವತ್ತೇ ಆಕೆಯ ಪ್ರಿಯಕರನ ಜೊತೆ ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ 18 ವರ್ಷ ತುಂಬುವ ವರೆಗೆ ಮೀನಾಳಿಗೆ ಮದುವೆ ಮಾಡದಂತೆ ಪೋಷಕರ ಬಳಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ವಿಚಾರಣೆ ಜಗಳ ಶುರು ಮಾಡಿದ್ದ ಮೀನಾಳ ಪ್ರಿಯಕರ ಮಚ್ಚು ತಂದು ಮೀನಾಳ ಕತ್ತು ಕತ್ತರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೀನಾಳ ಗ್ರಾಮದಿಂದ ಮೂರು ಕಿಲೋಮೀಟರ್ ದೂರದ ಹಮ್ಮಿಯಾಲ ಗ್ರಾಮದ ಪ್ರಕಾಶ್ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಅಷ್ಟೋ ಇಷ್ಟೋ ಸಂಪಾದನೆ ಮಾಡುತ್ತಿದ್ದ. ಅದು ಬಿಟ್ಟರೆ ಕಳೆದುಹೋದ ವರ್ಷದಿಂದ ಮೀನಾಳ ಹಿಂದೆಯೇ ಸುತ್ತುತ್ತಿದ್ದ. ಈ ಎರಡು ವ್ಯಕ್ತಿಗಳ ನಡುವಿನ ನೆಚ್ಚಿನ ಸಂಬಂಧವು ಪೂರ್ಣ ಊರಿಗೆ ಗೊತ್ತಿದ್ದಿತು. ಇವರ ಆತ್ಮೀಯತೆ ಎಷ್ಟು ಗಾಢವಿತ್ತು ಎಂದರೆ, ಪ್ರಕಾಶ್ ತನ್ನ ಬೈಕ್ ಮೀನಾಳಿನ ಮನೆಯಿಂದ ಶಾಲೆಗೆ ಡ್ರಾಪ್ ಮಾಡುತ್ತಿದ್ದ. ಮೇ 9ರ ಎಸ್ಎಸ್ಎಲ್ಸಿ ಪರೀಕ್ಷೆಯ ದಿನದಲ್ಲಿಯೇ ಮೀನಾ ಮತ್ತು ಪ್ರಕಾಶ್ ನಿಶ್ಚಿತಾರ್ಥಕ್ಕೆ ನೆರವೇರಿತು. ಅಂದಿನ ಈ ಸಂದರ್ಭದಲ್ಲಿ, ಅವರ ಬಂಧು ಮಿತ್ರರು ಅವರಿಗೆ ಖುಷಿ ಖುಷಿಯಾಗಿ ಕೇಕ್ ಕಟ್ ಮಾಡಿ ರಿಂಗ್ ಪಾಸ್ ಮಾಡಿದ್ದರು.

ಆದರೆ ಅಪ್ರಾಪ್ತೆಗೆ ಎಂಗೇಜ್ಮೆಂಟ್ ನಡೆಯುತ್ತಿದೆ ಎಂಬ ಮಾಹಿತಿಯನ್ನ ಯಾರೋ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು ಮೀನಾಳ ಪೋಷಕರಿಗೆ ಈಗಲೇ ಮದುವೆ ಮಾಡದಂತೆ ತಿಳಿ ಹೇಳಿದ್ದಾರೆ.

ಮೀನಾಳಿಗೆ 18 ವರ್ಷ ಆದ ಬಳಿಕವೇ ವಿವಾಹ ಮಾಡುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದಾರೆ. ಇಷ್ಟೇಲ್ಲ ಆದ ಬಳಿಕ ಪ್ರಕಾಶ್ ಮರ ಕಡಿಯುವ ಮಚ್ಚಿನೊಂದಿಗೆ ಮೀನಾಳ ಮನೆಗೆ ಬಂದ್ದು ಮೀನಾ ಹಾಗೂ ಅವಳ ಪೋಷಕರ ಜೊತೆ ಜಗಳವಾಡಿದ್ದಾನೆ. 18 ವರ್ಷ ಆಗುವವರೆಗೆ ಮದುವೆ ಬೇಡ ಎಂದು ಪೋಷಕರು ಹೇಳಿದ್ದು ಕೋಪಗೊಂಡು ಜಗಳ ಜೋರಾಗಿದೆ.

ಇದರಿಂದ ಕುಪಿತಗೊಂಡ ಪ್ರಕಾಶ್ ಮಚ್ಚಿನಿಂದ ಮೊದಲು ತಾಯಿ ಜಾನಕಿಯ ಕೈ ಕಡಿದಿದ್ದಾನೆ, ಜಾನಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಡೆಯಲು ಬಂದ ತಂದೆ ಸುಬ್ರಮಣಿಗೆ ಜಾಡಿಸಿ ಒದ್ದ ರಭಸಕ್ಕೆ ಅವರೂ ಕುಸಿದು ಬಿದ್ದಿದ್ದಾರೆ. ಬಳಿಕ ಪ್ರಕಾಶ್, ಮೀನಾಳನ್ನ ಎಳೆದೊಯ್ದಿದ್ದಾನೆ. ಮನೆಯಿಂದ ಅಂದಾಜು 300 ಮೀಟರ್ ದೂರದವರೆಗೆ ಎಳೆದೊಯ್ದು ಮೀನಾಳ ಕುತ್ತಿಗೆಯನ್ನೇ ಕಡಿದು ರುಂಡ ಮುಂಡ ಬೇರ್ಪಡಿಸಿ ರುಂಡದೊಂದಿಗೆ ಪರಾರಿಯಾಗಿದ್ದ.

Leave a Comment

Your email address will not be published. Required fields are marked *

Scroll to Top