Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ಬಾಡಿಗೆ ಡೇಟಿಂಗ್: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ ಭಾರತೀಯ ಯುವತಿಯ ಪೋಸ್ಟ್

Rent GF

ವಿದೇಶಿ ಸಂಸ್ಕೃತಿಯಾದ ಡೇಟಿಂಗ್ ಈಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಆದರೆ, ಜಪಾನ್ ಮತ್ತು ಚೀನಾ ದೇಶಗಳಲ್ಲಿ ಬಾಡಿಗೆ ಸಂಬಂಧಗಳು ಹೆಚ್ಚು ಜನಪ್ರಿಯವಾಗಿದ್ದು, ಆ ಪರಿಕಲ್ಪನೆ ಭಾರತಕ್ಕೂ ಕಾಲಿಟ್ಟಿದೆ.

ಇಂದಿನ ಅಚ್ಚರಿಯ ಸಂಗತಿ ಎಂದರೆ, ಭಾರತೀಯ ಯುವತಿಯೊಬ್ಬಳು ತಾನು ಬಾಡಿಗೆಗೆ ಸಿಗುತ್ತೇನೆ(GF rent) ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾಳೆ. ದಿವ್ಯಾ ಗಿರಿ ಎಂಬ ಯುವತಿ ಇನ್‌ಸ್ಟಾಗ್ರಾಂನಲ್ಲಿ “ನಿಮಗಾಗಿ ದಿನ ಬಾಡಿಗೆಗೆ ಸಿಗುತ್ತೇನೆ” ಎಂಬ ಪೋಸ್ಟ್ ಹಾಕಿಕೊಂಡಿದ್ದಾಳೆ. ಬಾಡಿಗೆ ಪಡೆಯುವುದಕ್ಕೂ ಮುನ್ನ ಆಕೆಗೆ ಹಣ ನೀಡಬೇಕಾಗಿದೆ ಮತ್ತು ಅದಕ್ಕಾಗಿ ಲಿಸ್ಟ್ ತಯಾರಿಸಿಕೊಂಡಿದ್ದಾಳೆ.

ಬಾಡಿಗೆ ಡೇಟಿಂಗ್ ರೇಟ್‌ಗಳು:
-ಚಿಲ್ ಕಾಫಿ ಕುಡಿಯುತ್ತಾ ಡೇಟ್ – ₹1,500
– ಸಾಮಾನ್ಯ ಡೇಟ್ (ಡಿನ್ನರ್ ಮತ್ತು ಸಿನಿಮಾ) – ₹2,000
– ಫ್ಯಾಮಿಲಿ ಜೊತೆ ಮೀಟಿಂಗ್ – ₹3,000
– ಈವೆಂಟ್ ಭಾಗವಹಿಸಲು – ₹3,500
– ಮನೆಯಲ್ಲಿ ಅಡುಗೆ ಮಾಡುತ್ತಾ ಡೇಟ್ – ₹3,500
– ಬೈಕ್ ಡೇಟ್ – ₹4,000
– ಶಾಪಿಂಗ್ ಮಾಡುತ್ತಾ ಡೇಟ್ – ₹4,500
– ಚಾರಣ, ಕಯಾಕಿಂಗ್ (ಬೋಟಿಂಗ್) – ₹5,000
– ನಮ್ಮ ಡೇಟಿಂಗ್ ಬಗ್ಗೆ ಪಬ್ಲಿಕ್ ಪೋಸ್ಟ್ ಹಂಚಲು – ₹6,000
– ವೀಕೆಂಡ್ (2 ದಿನ) ಡೇಟಿಂಗ್ಗಾಗಿ – ₹10,000

ಸದ್ಯ, ದಿವ್ಯಾ ಗಿರಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಈ ಪೋಸ್ಟ್ ನೋಡಿ ಅಚ್ಚರಿಗೊಂಡರೆ, ಇನ್ನು ಕೆಲವರು ಆಕೆಯ ಕಾಲೆಳೆಯುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top